ಈ ಗಜಲ್ ಕೆಲವು ಆಳವಾದ ವಿಚಾರಗಳನ್ನು ಪ್ರಸ್ತಾಪಿಸುತ್ತದೆ. ಶಬ್ದಗಳ ಆಚೆ ಇಣುಕಿ ನೋಡುವಿರಾದರೆ ಆ ವಿಚಾರಗಳು ಗೋಚರಿಸುತ್ತವೆ.
apana apana raasta hai kuchh nahin
kyaa bhalaa hai kyaa buraa hai kuchh nahin
ನಮ್ಮ ನಮ್ಮ ಹಾದಿಯೇ ಹೊರತು ಬೇರೇನಿಲ್ಲ
ಯಾವುದು ಒಳ್ಳೆಯದು, ಯಾವುದು ಕೆಟ್ಟದು, ಏನೂ ಇಲ್ಲ.
justuju hai ek musalsal justuju
kyaa kahin kuchh kho gayaa hai kuchh nahin
ಇದೊಂದು ನಿರಂತರ ಶೋಧನ
ಏನಾದರೂ ಕಳೆದುಹೋಗಿದೆಯೇ? ಏನೂ ಇಲ್ಲ.
mohar mere naam ki har shai pe hai
mere ghar mein meraa kyaa hai kucch nahin
ಪ್ರತಿಯೊಂದು ವಸ್ತುವಿನ ಮೇಲೂ ನನ್ನ ಮುದ್ರೆಯೇನೋ ಇದೆ
ನನ್ನ ಮನೆಯಲ್ಲಿ ನನ್ನದು ಏನಾದರೂ ಇದೆಯೇ? ಏನೂ ಇಲ್ಲ.
kahanewaale apani apani kah gaye
mujh se poochho kyaa sunaa hai kucch nahin
ಹೇಳುವವರೆಲ್ಲ ತಮ್ಮದನ್ನು ಹೇಳಿ ಹೋದರು
ನನ್ನನ್ನು ಕೇಳಿ ನಾನೇನು ಕೇಳಿಸಿಕೊಂಡೆ? ಏನೂ ಇಲ್ಲ.
koi darwaaze pe hai to kyaa huaa
aap se kucch maangata hai kucch nahin
ಯಾರೋ ಬಾಗಿಲಲ್ಲಿ ನಿಂತಿದ್ದರೆ ಏನಾಯಿತು?
ನಿಮ್ಮಿಂದ ಏನಾದರೂ ಬೇಡಿದ್ದಾರೆಯೇ? ಏನೂ ಇಲ್ಲ.
ಕನ್ನಡದಲ್ಲಿ ಪರಿಚಯಿಸಿದ ಈ ಗಜ಼ಲ್ ತುಂಬಾ ಅಂದ ಆಗಿದೆ
ReplyDelete