Friday 24 October 2014

Garaj Baras Pyaasi Dharati Par


garaj baras pyaasi dharati par phir paani de maulaa
chidiyon ko daane, bachchon ko gud-dhaani de maulaa

ದೇವರೇ, ಒಣಗಿ ಬಾಯಾರಿದ ಭೂಮಿಗೆ ಗುಡುಗಿ ಅಬ್ಬರಿಸಿ ಸುರಿಯುವ ಮಳೆ ನೀಡು
ಗುಬ್ಬಚ್ಚಿಗಳಿಗೆ ಧಾನ್ಯ-ಕಾಳುಗಳನ್ನು, ಮಕ್ಕಳಿಗೆ ಭದ್ರತೆ ನೀಡು

do aur do ka jod hameshaa chaar kahaan hotaa hai
soch samajhwaalon ko thodi naadaani de maulaa

ಎರಡು ಎರಡರ ಕೂಡಿಕೆ ಯಾವಾಗಲೂ ನಾಲ್ಕು ಆಗುವುದುಂಟೆ?
ದೇವರೇ, ಬುದ್ಧಿವಂತರಿಗೆ ಸ್ವಲ್ಪ ದಡ್ಡತನವನ್ನು ನೀಡು

phir raushan kar zehar kaa pyaalaa, chamkaa nayii saliibe
jhuuton ki duniyaa mein sach ko taabaani de maulaa

ವಿಷದ ಬಟ್ಟಲನ್ನು ಮತ್ತೆ ಪ್ರಕಾಶಿಸು, ಹೊಸ ಸಿಲುಬೆಯೊಂದಕ್ಕೆ ಮೆರಗು ನೀಡು
ದೇವರೇ, ಸುಳ್ಳುಗಳ ಈ ಲೋಕದಲ್ಲಿ ಸತ್ಯಕ್ಕೆ ಹೊಳಪು ನೀಡು

(ಇಲ್ಲಿ ಕವಿ, ಸಾಕ್ರಟೀಸ್ ಮತ್ತು ಕ್ರಿಸ್ತ್ರರನ್ನು ಉಲ್ಲೇಖಿಸುತ್ತಾರೆ. ವೈಜ್ಞಾನಿಕ ಸತ್ಯಗಳನ್ನು ಜಗತ್ತಿಗೆ ಪರಿಚಯಿಸಲು ಹೊರಟ ಸಾಕ್ರಟೀಸ್‌ಗೆ ವಿಷದ ಬಟ್ಟಲನ್ನು ಕೊಡಲಾಯಿತು. ಅದು ವಿಷವೆಂದು ಗೊತ್ತಿದ್ದರೂ ಸಾಕ್ರಟೀಸ್ ತನ್ನ ವೈಚಾರಿಕತೆಗೆ ಹೆಚ್ಚು ಜನಪ್ರಿಯತೆ ಬರಲೆಂದು ಅದನ್ನು ಸೇವಿಸಿ ಪ್ರಾಣಬಿಟ್ಟ. ತನ್ನ ನೀತಿ-ವಿಚಾರಗಳನ್ನು ದಮನ ಮಾಡಲು ಹಿಂಸೆಯ ಮಾರ್ಗ ಹಿಡಿದ ಸಮಾಜಕ್ಕೆ ಹೆದರದೇ ಕ್ರೀಸ್ತ ಮಾಡಿದ್ದೂ ಅಂಥದೇ ಆತ್ಮ ಬಲಿದಾನ. ಅಂತೆಯೇ ಕವಿ ದೇವರಲ್ಲಿ ಈ ಸುಳ್ಳುಗಳ ಲೋಕದಲ್ಲಿ ಸತ್ಯವನ್ನು ವಿಜ್ರಂಭಿಸಲು ಸಾಕ್ರಟೀಸ್ ಮತ್ತು ಕ್ರಿಸ್ತರಂಥವರು ಮತ್ತೆ ಬರಲಿ ಎಂದು ಬೇಡುತ್ತಾರೆ.)

phir muurat se baahar aakar caaro aur bikhar jaa
phir mandir ko koi meera diiwaani de maulaa

ಮತ್ತೆ ಪ್ರತಿಮೆಯಿಂದ ಹೊರಬಂದು ನಾಲ್ಕೂ ದಿಕ್ಕುಗಳಲ್ಲಿ ಹರಡಿಕೊ
ದೇವರೇ, ಮಂದಿರಕ್ಕೆ ಮತ್ತೆ ಒಬ್ಬ ಹುಚ್ಚು ಮೀರಾಳನ್ನು ನೀಡು

tere hote koi kisi ki jaan kaa dushman kyun ho
jeenewaalon ko marne ki aasaani de maulaa

ನೀನು ಇರುವುದು ಸತ್ಯವೆಂದರೂ ಜನ ಪರಸ್ಪರ ಪ್ರಾಣ ಶತ್ರುಗಳಾಗುತ್ತಿರುವುದೇಕೆ?
ದೇವರೇ, ಜೀವನ ಸಾಗಿಸುತ್ತಿರುವವರಿಗೆ ಸಾವನ್ನು ಸುಲಭವಾಗಿಸು

(ಅಂದರೆ, ಜನ ನೆಮ್ಮದಿಯಿಂದ - ಯಾವ ದ್ವೇಷ, ಹಗೆತನವಿಲ್ಲದೇ ಬದುಕಿ ನೆಮ್ಮದಿಯಿಂದಲೇ ಸಾವು ಪಡೆಯಲಿ.)

Wednesday 22 October 2014

Ae Husn-e-Beparwaah Tujhe


ae husn-e-beparwaah tujhe shabnam kahun shola kahun
phoolon mein bhi shokhee to hai, kis ko magar tujhsa kahun

ಓ ಚಿಂತೆಯಿಲ್ಲದ ಚೆಲುವೆಯೇ, ನಿನ್ನನ್ನು ಇಬ್ಬನಿ ಎನ್ನಲೇ, ಜ್ವಾಲೆ ಎನ್ನಲೆ?
ಬೆಡಗು-ಬಿನ್ನಾಣ ಹೂಗಳಲ್ಲೂ ಇದೆ ನಿಜ, ಆದರೆ ನಿನ್ನನ್ನು ಯಾವ ಹೂವಿಗೆ ಹೋಲಿಸಲಿ?
(ಅಂದರೆ, ನಿನ್ನಂತಹ ಒಯ್ಯಾರ ಯಾವ ಹೂವಿನಲ್ಲೂ ಇಲ್ಲ)

gesu ude mehki fazaa, jaadu karein aankhein teri
soyaa hua manzar kahun ya jaagataa sapnaa kahun

ನಿನ್ನ ಕೇಶ ಗಾಳಿಯಿಂದ ಹಾರುತ್ತಿದ್ದರೆ ಗಾಳಿಯೆಲ್ಲೆಲ್ಲ ಪರಿಮಳ, ನಿನ್ನ ಕಣುಗಳೋ ಮೋಡಿ ಮಾಡುತ್ತವೆ 
ನಿನ್ನನ್ನು ನಿದ್ರಿಸುತ್ತಿರುವ ಮೋಹಕ ದೃಶ್ಯವೆನ್ನಲೇ, ಒಂದು ಹಗಲುಗನಸೆನ್ನಲೆ?

chandaa ki tu hai chaandani, lehron ki tu hai raagini
jaan-e-tamanna main tujhe kya kya kahun, kya na kahun

ನೀನು ಚಂದ್ರನ ಬೆಳದಿಂಗಳೇ ಹೌದು, ಅಲೆಗಳ ಸಂಗೀತವೂ ಹೌದು
ನನ್ನ ಒಲುಮೆಯ ಜೀವವೇ, ನಿನ್ನನ್ನು ಏನೆಲ್ಲವೆನ್ನಲಿ, ಏನು ಅನ್ನದಿರಲಿ?

Tuesday 21 October 2014

Itana Tootaa Hoon


itana tootaa hoon ke chhoone se bikhar jaaungaa
ab agar aur duaa do ge to mar jaaungaa


ನಾನೆಷ್ಟು ಒಡೆದು ಹೋಗಿರುವೆನೆಂದರೆ ಮುಟ್ಟಿದರೆ ಚದರಿ ಹೋಗುವೆ
ನನಗಾಗಿ ಏನೋ ಹಾರೈಸಿದರೂ ಸಾಕು ನಾನು ಸತ್ತೇ ಹೋಗುವೆ

poochh kar meraa pataa waqt raayagaan na karo
main to banjaaraa hoon kyaa jaane kidhar jaaungaa

ನನ್ನ ವಿಳಾಸ ಕೇಳಿಕೊಂಡು ಸಮಯ ನಷ್ಟ ಮಾಡಬೇಡ
ನಾನಂತೂ ಅಲೆಮಾರಿ, ಏನು ಗೊತ್ತು ಎಲ್ಲಿ ಹೋಗುವೆ

har taraf dhundh hai, jugnu hai na charaag koi
kaun pahchaanegaa basti mein agar jaaungaa

ಎಲ್ಲ ಕಡೆಗೂ ಮಂಜಿನ ಮುಸುಕು, ಒಂದು ಮಿಂಚು ಹುಳದ ಬೆಳಕಿಲ್ಲ, ಒಂದು ದೀಪವಿಲ್ಲ
ಊರೊಳಗೆ ಹೋದೆನೆಂದರೆ ನನ್ನನ್ನು ಗುರುತಿಸುವವರು ಯಾರು

zindagi main bhi musaafir hoon teri kashti ka
tu jahaan mujh se kahegi main utar jaaunga

ಬದುಕೇ, ನಾನೂ ನಿನ್ನ ದೋಣಿಯಲ್ಲಿನ ಪ್ರಯಾಣಿಕ
ನೀನು ಎಲ್ಲಿ ಇಳಿಯಲು ಹೇಳುವೆಯೋ ಅಲ್ಲಿ ಇಳಿದು ಹೋಗುವೆ

phool rah jaayenge guldaano mein, yaadon ki nazar
main to khushboo hoon fizaaon mein bikhar jaaunga

ಹೂದಾನಿಗಳಲ್ಲಿ ಹೂಗಳು ಉಳಿದುಕೊಳ್ಳುವವು, ನೆನಪುಗಳಾಗಿ
ನಾನೋ ಪರಿಮಳವಿದ್ದಂತೆ, ಗಾಳಿಯಲ್ಲಿ ಹರಡಿಹೋಗುವೆ

Apana Apana Raasta Hai



ಈ ಗಜಲ್‌ ಕೆಲವು ಆಳವಾದ ವಿಚಾರಗಳನ್ನು ಪ್ರಸ್ತಾಪಿಸುತ್ತದೆ. ಶಬ್ದಗಳ ಆಚೆ ಇಣುಕಿ ನೋಡುವಿರಾದರೆ ಆ ವಿಚಾರಗಳು ಗೋಚರಿಸುತ್ತವೆ.

apana apana raasta hai kuchh nahin
kyaa bhalaa hai kyaa buraa hai kuchh nahin

ನಮ್ಮ ನಮ್ಮ ಹಾದಿಯೇ ಹೊರತು ಬೇರೇನಿಲ್ಲ
ಯಾವುದು ಒಳ್ಳೆಯದು, ಯಾವುದು ಕೆಟ್ಟದು, ಏನೂ ಇಲ್ಲ.


justuju hai ek musalsal justuju
kyaa kahin kuchh kho gayaa hai kuchh nahin

ಇದೊಂದು ನಿರಂತರ ಶೋಧನ
ಏನಾದರೂ ಕಳೆದುಹೋಗಿದೆಯೇ? ಏನೂ ಇಲ್ಲ.


mohar mere naam ki har shai pe hai
mere ghar mein meraa kyaa hai kucch nahin

ಪ್ರತಿಯೊಂದು ವಸ್ತುವಿನ ಮೇಲೂ ನನ್ನ ಮುದ್ರೆಯೇನೋ ಇದೆ
ನನ್ನ ಮನೆಯಲ್ಲಿ ನನ್ನದು ಏನಾದರೂ ಇದೆಯೇ? ಏನೂ ಇಲ್ಲ.


kahanewaale apani apani kah gaye
mujh se poochho kyaa sunaa hai kucch nahin

ಹೇಳುವವರೆಲ್ಲ ತಮ್ಮದನ್ನು ಹೇಳಿ ಹೋದರು
ನನ್ನನ್ನು ಕೇಳಿ ನಾನೇನು ಕೇಳಿಸಿಕೊಂಡೆ? ಏನೂ ಇಲ್ಲ.


koi darwaaze pe hai to kyaa huaa
aap se kucch maangata hai kucch nahin

ಯಾರೋ ಬಾಗಿಲಲ್ಲಿ ನಿಂತಿದ್ದರೆ ಏನಾಯಿತು?
ನಿಮ್ಮಿಂದ ಏನಾದರೂ ಬೇಡಿದ್ದಾರೆಯೇ? ಏನೂ ಇಲ್ಲ.

Monday 20 October 2014

Tum Itana Jo Muskuraa Rahe Ho



tum itana jo muskuraa rahe ho
kya gham hai jis ko chhupa rahe ho

ನೀನು ಅದೆಷ್ಟು ಮಂದಹಾಸ ಬೀರುತ್ತಿರುವೆ, ಅದ್ಯಾವ ನೋವನ್ನು ಮರೆಮಾಚುತ್ತಿರುವೆ?

aankhon mein nami, hansi labon par
kya haal hai kya dikha rahe ho

ಕಣ್ಣುಗಳಲ್ಲಿ ತೇವವಿದೆ, ತುಟಿಗಳ ಮೇಲೆ ನಗುವಿದೆ. ನಿನ್ನ ಅವಸ್ಥೆಯೇ ಬೇರೆ, ನೀನು ವ್ಯಕ್ತಪಡಿಸುತ್ತಿರುವುದೇ ಬೇರೆ.

ban jaayenge zehar peete peete
yeh ashk jo peete jaa rahe ho

ನುಂಗುತ್ತಲೇ ವಿಷವಾಗಿಬಿಡುವವು, ನೀನು ನುಂಗುತ್ತಲೇ ಸಾಗಿರುವ ಈ ಕಣ್ಣೀರಿನ ಹನಿಗಳು

jin zakhmon ko waqt bhar chalaa hai
tum kyon unhe chhede jaa rahe ho

ಯಾವ ಗಾಯಗಳನ್ನು ಸಮಯ ಗುಣಪಡಿಸುತ್ತ ಸಾಗುತ್ತಿದೆಯೋ ಅವುಗಳನ್ನು ನೀನೇಕೆ ಕೆದಕುತ್ತ ಹೊರಟಿರುವೆ?

rekhaaon ka khel hai muqaddar
rekhaaon se maat khaa rahe ho

ಅದೃಷ್ಟವೆಂಬುದು ರೇಖೆಗಳ ಒಂದು ಆಟ. ನೀನು ರೇಖೆಗಳಿಗೆ (ಅದೃಷ್ಟದ ಆಟಕ್ಕೆ) ಸೋಲುತ್ತಿರುವೆಯಲ್ಲ!
(ಕವಿ ಇಲ್ಲಿ 'ರೇಖೆಗಳ ಅದೃಷ್ಟದ ಆಟದಲ್ಲಿ ಸೋಲುವ ಬದಲು, ಜಯಿಸುವ ಛಲ ಬೆಳೆಸಿಕೊ' ಎಂದು ಹೇಳುತ್ತಿರುವಂತಿದೆ.)

Kaun Aayega Yahaan


kaun aayega yahaan koi na aaya hoga
mera darwaaza hawaaon ne hilaaya hoga

ಇಲ್ಲಿಗೆ ಯಾರು ಬಂದಾರು? ಯಾರೂ ಬಂದಿರಲಿಕ್ಕಿಲ್ಲ. ನನ್ನ ಮನೆಯ ಬಾಗಿಲನ್ನು ಗಾಳಿ ಕದಲಿಸಿರಬಹುದು.

dil-e-naadaan na dhadak, ye dil-e-naadaan na dhadak
koi khat leke padosi ke ghar aaya hoga

ಅಮಾಯಕ ಹೃದಯವೇ, ಓ
ಅಮಾಯಕ ಹೃದಯವೇ, ಪುಳಕಗೊಂಡು ಸ್ಪಂದಿಸದಿರು. ಪಕ್ಕದ ಮನೆಗೆ ಪತ್ರ ತಂದು ಯಾರೋ ಬಂದಿರಬಹುದು.

gul se lipti huee titali ko giraakar dekho
aandhiyon tum ne darakhton ko giraaya hoga

ಹೂವನ್ನು ತಾಕಿ ಕುಳಿತಿರುವ ಚಿಟ್ಟೆಯನ್ನು ಬೀಳಿಸಿ ನೋಡಿ, ಬಿರುಗಾಳಿಗಳೇ ನೀವು ಮರಗಳನ್ನು ಬೀಳಿಸಿರಬಹುದು.

'Kaif' pardes mein mat yaad karo apna makaan
abke baarish ne use tod giraaya hoga

’ಕೈಫ್’, ಬೇರಾವುದೋ ಊರಲ್ಲಿ ನಿನ್ನ ಮನೆಯನ್ನು ನೆನೆಯಬೇಡ, ಈಗಾಗಲೇ ಮಳೆ ಅದನ್ನು ಒಡೆದುಹಾಕಿರಬಹುದು.